Index   ವಚನ - 1628    Search  
 
ಶರಣನೆನಿಸಿಕೊಂಬುದು ಕರ ಅರಿದು ನೋಡಯ್ಯಾ! ಸತ್ಯಸದ್ಭಕ್ತರೊಳಡಗಿ ತನ್ನ ಕುರುಹ ಲೋಕಕ್ಕೆ ತೋರದಿರಬೇಕು. ಸಕಲಜೀವರಾಶಿಗಳಿಗೆ ರೋಷ ಹರುಷವ ತಾಳದಿರಬೇಕು. ಇಂತಪ್ಪ ಶರಣನಲ್ಲಿ ಸನ್ನಿಹಿತ ನಮ್ಮ ಕೂಡಲಚೆನ್ನಸಂಗಮದೇವ.