Index   ವಚನ - 1629    Search  
 
ಶರಣ ಮೂರ್ತನಲ್ಲ, ಅಮೂರ್ತನಲ್ಲ, ಲಿಂಗದಲ್ಲಿ ಪ್ರಾಣಸಂಚಿತ, ಪ್ರಾಣದಲ್ಲಿ ಪ್ರಸಾದಸಂವರಣೆ, ಪ್ರಸಾದದಲ್ಲಿ ಕಾಯಾಶ್ರಿತನು-ಲೋಕಲೌಕಿಕ ಪ್ರಕಾರದುದಯನಲ್ಲ. ಕೂಡಲಚೆನ್ನಸಂಗಾ ನಿಮ್ಮ ಶರಣ.