Index   ವಚನ - 1630    Search  
 
ಶರಣ ಶರಣನ ಕಂಡು, 'ಶರಣು' ಎಂದು ಕರವ ಮುಗಿವುದೆ ಭಕ್ತಿಲಕ್ಷಣ. ಶರಣ ಶರಣನ ಕಂಡು, ಪಾದವಿಡಿದು ವಂದಿಸುವುದೆ ಭಕ್ತಿಲಕ್ಷಣ. ಶರಣ ಚರಣವ ಪಿಡಿಯದೆ ಕಂಡೂ ಕಾಣದೆ ಪೋದನಾದಡೆ ಕೂಡಲಚೆನ್ನಸಂಗನ ಶರಣರು ಮನ್ನಿಸರಯ್ಯಾ.