Index   ವಚನ - 1634    Search  
 
ಶಾಖೆಯಿಲ್ಲದೆ ಕಪಿ ಪಿಡಿಯದು ಚಿಗುರಿಲ್ಲದೆ ಪಿಕ ನುಡಿಯದು, ಪ್ರಭೈಸಿದಲ್ಲದೆ ಉಲಿಯದು ಕುಕ್ಕುಟ ಹೂಮಿಡಿಯ ಹರಿದು ಹಣ್ಣನರಸಲುಂಟೆ? ತಮ್ಮ ಮರೆಯದೆ ಲಿಂಗವ ಮೆರೆವರೆಲ್ಲ ಅಜ್ಞಾನಿಗಳು ಅನಾಚಾರಿಗಳು ಆಚಾರಭ್ರಷ್ಠರು. ಗುರುಲಿಂಗಜಂಗಮ ದ್ರೋಹಿಗಳು. ಅಶನವರತು ವ್ಯಸನ ನಿಂತು ತನು ಕರಗಿ ಮನವೆರಗಿ ನಿಮಗೆ ಮಾಡದ ಅಜ್ಞಾನಿಗಳನೇನೆಂಬೆ ಕೂಡಲಚೆನ್ನಸಂಗಮದೇವಾ.