Index   ವಚನ - 1640    Search  
 
ಶಿವಭಕ್ತನಾದ ಬಳಿಕ ಭವಿ ಮಿಶ್ರವ ನಡೆಯಲಾಗದು, ಅನ್ಯದೈವದ ಭಜನೆಯ ಮಾಡಲಾಗದು. "ಮಾತರಃ ಪಿತರಶ್ಚೈವ ಭರ್ತಾರೋ ಬಾಂಧವಸ್ತಥಾ ಶಿವಸಂಸ್ಕಾರಹೀನಾಶ್ಚೇತ್ ಪಾಕೋ ಗೋಮಾಂಸಭಕ್ಷಣಂ" ಎಂದುದಾಗಿ ಕೂಡಲಚೆನ್ನಸಂಗಯ್ಯಾ ನಿಮ್ಮ ಲಿಂಗಸಂಗಿಗಳಂಗವಿಸರು.