Index   ವಚನ - 1663    Search  
 
ಶೂನ್ಯವ ನುಡಿದು ದುರ್ಗತಿಗಿಳಿದವರ, ಅದ್ವೈತವ ನುಡಿದು ಅಹಂಕಾರಿಗಳಾದವರ, ಬ್ರಹ್ಮವ ನುಡಿದು ಭ್ರಮಿತರಾದವರ, ತ್ರಿಕಾಲ ಲಿಂಗಪೂಜೆಯ ಮಾಡದವರ ಬ್ರಹ್ಮದ ಅನವರತ ಮಾತ ಕೇಳಿ, ಹಿಡಿದ ವ್ರತನೇಮಗಳ ಬಿಡುವವರ- ಈ ದುರಾಚಾರಿಗಳ ಮೆಚ್ಚ, ಕೂಡಲಚೆನ್ನಸಂಗಾ ನಿಮ್ಮ ಶರಣ.