Index   ವಚನ - 1664    Search  
 
ಶೃಂಗಾರಾದಿ ನವರಸ ರಸಿಕನಾದಹೆನೆಂಬವ ನವಖಂಡಮಂಡಲಾಧಾರದಲ್ಲಿ ಕರ ಚಂಡನಾಗದೆ, ನವವಿಧ ಬಂಧನಕ್ಕೊಳಗಾಗದೆ, ನವನಾಳದಲ್ಲಿ ಕಳಾಹೀನನಾಗದೆ, ಇಂತೀ ನವಸಂಪಾದನೆ ಮೂವತ್ತಾರು ಪ್ರಕಾರಂಗಳು ಪ್ರಾಣಲಿಂಗಕ್ಕೆ ಸಲುವರನರಿತು ಸಲಿಸುವದು, ಸಲ್ಲದಿದ್ದಡೆ ತನಗಾಗಿ ಚಿಂತಿಸಲಾಗದು ಕೂಡಲಚೆನ್ನಸಂಗಮದೇವಾ.