Index   ವಚನ - 1670    Search  
 
ಶ್ರೀಗುರು ಲಿಂಗ ಜಂಗಮದ ಪಾದೋದಕ ಪ್ರಸಾದವ ಕೊಂಡೆವೆಂಬರು. ಅವರು ಕೊಟ್ಟ ಪರಿಯಾವುದು? ನೀನುಕೊಂಡ ಪರಿಯಾವುದು? ಆ ಗುರುವಿಂಗೆ ಜಂಗಮಪ್ರಸಾದವೆ ಬೇಕು, ಆ ಲಿಂಗಕ್ಕೆ ಜಂಗಮಪ್ರಸಾದವೆ ಬೇಕು. ಅದೆಂದೆಂತಡೆ: "ಚರಪ್ರಸಾದಸ್ಸಂಗ್ರಾಹ್ಯೋ ಗುರುಲಿಂಗಜಂಗಮಾನಾಂ| ತದುಚ್ಛಿಷ್ಟಂ ತು ಸಂಪ್ರಾಪ್ಯ ಭವಾನ್ಮುಕ್ತಿಸ್ತದಾ ಭವೇತ್"|| ಎಂದುದಾಗಿ ಕೂಡಲಚೆನ್ನಸಂಗಯ್ಯಾ, ನಿಮ್ಮ ಜಂಗಮಪ್ರಸಾದವಿಲ್ಲದಿರ್ದಡೆ ಗುರುವಾಗಬಾರದು, ಲಿಂಗವಾಗಬಾರದು, ಜಂಗಮವಾಗಬಾರದು.