Index   ವಚನ - 1678    Search  
 
ಶ್ರೀಗುರು ಸಪ್ತವಿಧದೀಕ್ಷೆಯನಿತ್ತು ಶಿಷ್ಯನ ಶಿರದರಮನೆಯ ಚಿತ್ಕಲೆಯನೆ ಇಷ್ಟಲಿಂಗವಾಗಿ ಮಾಡಿ ಆಂಗದಲ್ಲಿ ಸಂಗಗೊಳಿಸಿದ ಬಳಿಕ ಆದೆ ಪ್ರಾಣಲಿಂಗವೆಂದರಿದು ಸಾವಧಾನದಿಂದರ್ಚಿಸಬೇಕು. ಆದನಾವಾಗಳೂ ತನುವಿಂದಗಲದಿರಬೇಕು. ಇದು ಶರಣರ ಮಚ್ಚು ಪರಾತನರ ನಚ್ಚು! ಇದನರಿಯದೆ ದುರ್ಲಕ್ಷ್ಯದಿಂದ ಲಿಂಗವನಗಲಿದ ಭಂಗಿತರ ಕೂಡಲಚೆನ್ನಸಂಗಯ್ಯನ ಶರಣರೆಂತು ಮೆಚ್ಚುವರು?