ಹರ[ನಿತ್ತಾ]ಗ್ರಹ ನಿಗ್ರಹದ ಬೆಸನ,
ಗುರುನಿರೂಪವೆಂದು ಕೈಕೊಂಡು,
ಕರುಣಿ ಬಸವಣ್ಣ ಕೈಲಾಸದಿಂದ
ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬೇಕೆಂದು
ಏಳುನೂರೆಪ್ಪತ್ತು ಅಮರಗಣಂಗಳು ಸಹಿತ
ಮರ್ತ್ಯಲೋಕಕ್ಕೆ ಬಂದನಯ್ಯಾ.
ಶಿವಸಮಯಕ್ಕಾಧಾರವಾದನಯ್ಯಾ, ಬಸವಣ್ಣನು.
ಜಡರುಗಳ ಮನದ ಕತ್ತಲೆಯ ಕಳೆಯಲೆಂದು
ಕಟ್ಟಿತ್ತು ಕಲ್ಯಾಣದಲ್ಲಿ ಮಹಾಮಠವು.
ಪರಮನಟ್ಟಿದ ಓಲೆ ಬಂದಿಳಿಯಿತ್ತು,
ಬಿಜ್ಜಳನ ಸಿಂಹಾಸನದ ಮುಂದೆ.
ಅದತಂದು ಓದಿದಡೆ ಸೃಷ್ಟಿಯ
ಸೇನಬೋವರಿಗೆ ತಿಳಿಯದು
ಛಪ್ಪನ್ನ ದೇಶದ ಭಾಷೆಯ ಲಿಪಿ ಮುನ್ನವಲ್ಲ.
ಇದನೋದಿದವರಿಗೆ ಆನೆ ಸೇನೆ ಕುದುರೆ ಭಂಡಾರ
ಅರವತ್ತಾರು ಕರಣಿಕರಿಗೆ ಮುಖ್ಯನ ಮಾಡುವೆನೆಂದು
ಬಿಜ್ಜಳ ಭಾಷೆಯ ಕೊಡುತ್ತಿರಲು,
ಹರನಿರೂಪವ ಶಿರದ ಮೇಲಿಟ್ಟು ಶಿವಶರಣೆಂದು
ಬಸವಣ್ಣನೋದಿ ಮೆಟ್ಟಿ ತೆಗೆಸಿದನಯ್ಯಾ
ಅರವತ್ತಾರು ಕೋಟಿ ವಸ್ತುವ ಅರಮನೆಗೆ.
ರಾಜ್ಯಕ್ಕೆ ಅರಮನೆಗೆ [ಶಿರಃ ಪ್ರಧಾನ]ನಾಗಿ
ಹರಗಣಂಗಳಿಗೆ ಗತಿಮತಿ ಚೈತನ್ಯನಾಗಿ
ಕೂಡಲಚೆನ್ನಸಂಗಯ್ಯನಲ್ಲಿ
ಅಂಡಜದೊಳಗಿದ್ದು ಶಿವನ ಭಂಡಾರಿಯಾದನಯ್ಯಾ
ಎನ್ನ ತಂದೆ ಪೂರ್ವಾಚಾರಿ ಸಂಗನಬಸವಣ್ಣನು.
Art
Manuscript
Music
Courtesy:
Transliteration
Hara[nittā]graha nigrahada besana,
gurunirūpavendu kaikoṇḍu,
karuṇi basavaṇṇa kailāsadinda
guruliṅgajaṅgamakke bhaktiya māḍabēkendu
ēḷunūreppattu amaragaṇaṅgaḷu sahita
martyalōkakke bandanayyā.
Śivasamayakkādhāravādanayyā, basavaṇṇanu.
Jaḍarugaḷa manada kattaleya kaḷeyalendu
kaṭṭittu kalyāṇadalli mahāmaṭhavu.
Paramanaṭṭida ōle bandiḷiyittu,
bijjaḷana sinhāsanada munde.
Adatandu ōdidaḍe sr̥ṣṭiya
sēnabōvarige tiḷiyadu
chappanna dēśada bhāṣeya lipi munnavalla.
Idanōdidavarige āne sēne kudure bhaṇḍāra
aravattāru karaṇikarige mukhyana māḍuvenendu
bijjaḷa bhāṣeya koḍuttiralu,
haranirūpava śirada mēliṭṭu śivaśaraṇendu
basavaṇṇanōdi meṭṭi tegesidanayyā
aravattāru kōṭi vastuva aramanege.
Rājyakke aramanege [śiraḥ pradhāna]nāgi
haragaṇaṅgaḷige gatimati caitan'yanāgi
kūḍalacennasaṅgayyanalli
Aṇḍajadoḷagiddu śivana bhaṇḍāriyādanayyā
enna tande pūrvācāri saṅganabasavaṇṇanu.