Index   ವಚನ - 1733    Search  
 
ಹರಿದ ಶಿರವ ಹಚ್ಚಿ ಮೆರೆದರು ನಮ್ಮ ಶರಣರು, ಭಕ್ತಿಯ ಪ್ರಭಾವದಿಂದ. ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು, ಭಕ್ತಿಯ ಪ್ರಭಾವದಿಂದ. ಪೂರ್ವಕುಲಗೋತ್ರವನಳಿದು ಪುನೀತರಾದರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ. "ಭಕ್ತೇರಸಾಧ್ಯಂ ನ ಹಿ ಕಿಂಚಿದಸ್ತಿ ಭಕ್ತ್ಯಾ ಸರ್ವಸಿದ್ಧಯಃ ಸಿದ್ಧ್ಯಂತಿ" ಎಂಬ ವಚನವುಂಟಾಗಿ-ಭಕ್ತಂಗೆ ಅಸಾಧ್ಯವಾವುದು? ಅದು ಕಾರಣ, ನಿಮ್ಮಡಿಯ ಭಕ್ತಿಯನೊಂದನೆ ಕರುಣಿಸಿ ಕಾಪಾಡಯ್ಯಾ ಕೂಡಲಚೆನ್ನಸಂಗಮದೇವಾ.