Index   ವಚನ - 1736    Search  
 
ಹಲವು [ಪರಿಯ] ಪುಷ್ಪದಲ್ಲಿ ಪರಿಮಳವನರಸುವರೆ? ಪಿರಿದು ರಸದಾಳಿಯ ಕಟ್ಟಿನಲ್ಲಿ ಹಣ್ಣನರಸುವರೆ? ಸುರಭಿಗೆ ತನು ಕತ್ತಲೆಯೆಂದು ಬೆಳಗನರಸುವರೆ? ಪರಶಿವಮೂರ್ತಿ ಸಂಗನ ಶರಣರಲ್ಲಿ ಕ್ರಿಯೆ ನಿಃಕ್ರಿಯೆಯನರಸುವರೆ? ಅವರಿದ್ದಿರವೆ ಮುಕ್ತಿ, ಕೂಡಲಚೆನ್ನಸಂಗಮದೇವಾ.