Index   ವಚನ - 1744    Search  
 
ಹಾಲ ಹಿಡಿದು ಬೆಣ್ಣೆಯನರಸಲುಂಟೆ? ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ? ಲಿಂಗಸಂಗವ ಮಾಡಿಹೆನೆಂಬಾತಂಗೆ ಅನ್ಯದೈವಭಜನೆ ಏತಕ್ಕಯ್ಯಾ? "ಇಷ್ಟಲಿಂಗಮವಿಶ್ವಸ್ಯ, ಯೋsನ್ಯದೈವಮುಪಾಸತೇ| ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್"|| ಇಂತೆಂದುದಾಗಿ, ಇಂತಪ್ಪ ಪಾತಕಂಗೆ ಅಘೋರನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.