Index   ವಚನ - 1745    Search  
 
ಹುಲಿ ಹಾವು ಕಿಚ್ಚು ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ ಅಯ್ಯಾ? ನೊಂದರೆ ನೋಯಲಿ, ಇದರಿಂದೇನಾದಡಾಗಲಿ ಕಂಡು ಸುಮ್ಮನಿರ್ದಡೆ ದ್ರೋಹ. ಆನೆಯ ಚೋಹವ ತೊಟ್ಟು ನಾಯಾಗಿ ಬಗುಳಿದಂತೆ, ಭಕ್ತನಾಗಿ ಭವಿಯೊಡ ಕೂಟಂಗಳ ಮಾಡಿ, ಭವಿಶೈವದೈವಕ್ಕೆರಗಿ, ಭವಿಸಂಗ ಭವಿಸೇವೆ, ಭವಿಪಾಕ ಭವಿಪಂತಿ ಭವಿಶೈವಕ್ರಿಯೆ ಮಾಡಿ, ಕೆಟ್ಟು ನಡೆದು ಕೊಟ್ಟು ವರ್ತಿಸಿ, ನರಕಭಾಜನರಾಗಿ ಹೋಹಲ್ಲಿ, ಅರಿದರಿದು ಗುರುರೂಪರಾದ ಶರಣರು ಸುಮ್ಮನಿರ್ದಡೆ ದ್ರೋಹ. ಇದೇನು ಕಾರಣವೆಂದಡೆ, ಆ ಭಕ್ತಮಾರ್ಗವು ಸತ್ಯಶರಣರದಾಗಿ. ಅವರ ಹಾನಿವೃದ್ಧಿ ತನ್ನದಾಗಿ, ಅವರ ಸುಖದುಃಖಂಗಳು ತನ್ನವಾಗಿ. ಅದು ಕಾರಣ ಅವರ ಹೊಡೆದು ಬಡಿದು ಜಡಿದು ನುಡಿದು ತಡಿಗೆ ಸಾರಿಸಿದಲ್ಲಿ ಒಡಗೂಡಿಕೊಂಡಿಪ್ಪ ಲಿಂಗವು. ಅಲ್ಲದಿರ್ದಡೆ ನಡುನೀರೊಳಗದ್ದುವನು ಕೂಡಲಚೆನ್ನಸಂಗಯ್ಯ.