Index   ವಚನ - 1753    Search  
 
ಹೊದ್ದದಂತೆ ಮಾಡಿದ, ತನ್ನ ಸಾರದಂತೆ ಮಾಡಿದ. ಕಾಮವ ತಂದು ಕಣ್ಣಿಗೆ ತೋರಿದ, ವಿಧಿಯ ತಂದು ಮುಂದೊಡ್ಡಿದನು ನೋಡಯ್ಯಾ. ಪ್ರಸಾದಸಾಧಕರಿಗೆ ಇದೆ ವಿಘ್ನವಯ್ಯಾ, ಕೂಡಲಚೆನ್ನಸಂಗಮದೇವಯ್ಯ ತನ್ನ ಹೊದ್ದದಂತೆ ಮಾಡಿದನಯ್ಯಾ.