Index   ವಚನ - 1755    Search  
 
ಹೊನ್ನಿಂಗೆ ಕೂರ್ತು ಜಂಗಮವನ ವಿಶ್ವಾಸವ ಮಾಡುವೆ, ಹೆಣ್ಣಿಂಗೆ ಕೂರ್ತು ಜಂಗಮವನ ವಿಶ್ವಾಸವ ಮಾಡುವೆ, ಮಣ್ಣಿಂಗೆ ಕೂರ್ತು ಜಂಗಮವನ ವಿಶ್ವಾಸವ ಮಾಡುವೆ, ಎಲೆ ಕುಚಿತ್ತಮನವೆ, ಕುಚಿತ್ತಾಶ್ರಯದಲ್ಲಿ ಎನ್ನನಿರಿಸದಿರಾ, ಸುಚಿತ್ತವಾಗಿ ಬಸವನೆಂದೆನಿಸಾ ಕೂಡಲಚೆನ್ನಸಂಗಯ್ಯಾ, ಎನ್ನ ಚಿತ್ತವು ಕಾಡಿಹುದಯ್ಯಾ.