Index   ವಚನ - 3    Search  
 
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ ನಿಜಪ್ರಸಾದವೆಂಬ [ಈ ಚತುರ್ವಿಧ ಪ್ರಸಾದದ] ನಿರ್ಣಯ[ವ]ನರಿದು [ಕೊಂಡು] ಕೊಡಬಲ್ಲಾತನೆ ಗುರು, ತಿಳಿದು ಕೊಳಬಲ್ಲಾತನೆ ಸದ್ಭಕ್ತ. ಈ ಭೇದವನರಿಯದೆ ಅಚ್ಚ ನಿಚ್ಚ ಪ್ರಸಾದವೆಂದು ನೀರಕೂಳನುಂಬುವ ಉಚ್ಫಿಷ್ಟ ಮುದಿಹೊಲೆಯರ ಮೂಗು ಕೊಯ್ಯದೆ ಮಾಣ್ಬನೆ [ನಿಮ್ಮ ಶರಣ] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.