Index   ವಚನ - 1    Search  
 
ವಚನಾರ್ಥವನರಿದು ನುಡಿದಿಹೆನೆಂದಡೆ, ರಚನೆಯ ರಂಜನೆಗೆ ಒಳಗಾಯಿತ್ತು. ತತ್ವವನಟ್ಟೈಸಿಹೆನೆಂದಡೆ ಆತ್ಮಘಾತಕ ಭೂತಸಿದ್ಧಿಗೊಳಗಾಯಿತ್ತು. ಸರ್ವವೂ ತಾನೆಂದರಿದವಗೆ ಸಂದೇಹಸೂತಕವಿಲ್ಲ. ಅರಿವು ಆತ್ಮನಲ್ಲಿ ವೇದ್ಯವಾದವಗೆ ಆ ಸರ್ವವೂ ಅಹುದಲ್ಲಾಯೆಂದು ನಿಂದ ಮತ್ತೆ. ಮಾರ್ಪೊಳಲನೇರಿದ ಧೀರನಂತಿರಬೇಡವೆ ಪರಮವಿರಕ್ತಿ. ಲೋಲಿಯ..... ದಂತೆ, ಜೋಲಿಯ ಕೀಲಿನಂತೆ ಗ್ರಂಥಿಯ ಗಸಣದಂತಿಪ್ಪವರ ಕಂಡೆನಗೆ ಹೇಸಿಕೆಯಾಯಿತ್ತು. ಪರತತ್ವಪ್ರಕಾಶ ಚೆನ್ನರಾಮೇಶ್ವರಲಿಂಗವನರಿವುದಕ್ಕೆ ಅಹುದೋ, ಅಲ್ಲವೋ ಎನುತಿರ್ದೆನು.