ಲೋಕ ಲೌಕಿಕಂಗಳಿಲ್ಲದಂದು,
ಕುಲ ಛಲಂಗಳಿಲ್ಲದಂದು,
ಹಮ್ಮು ಬಿಮ್ಮುಗಳಿಲ್ಲದಂದು,
ದೇಹ ನಿರ್ದೆಹಗಳಿಲ್ಲದಂದು,
ಪ್ರಾಣ ನಿಃಪ್ರಾಣಂಗಳಿಲ್ಲದಂದು,
ಇವೇನೇನೂ ಇಲ್ಲದಂದು,
ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Lōka laukikaṅgaḷilladandu,
kula chalaṅgaḷilladandu,
ham'mu bim'mugaḷilladandu,
dēha nirdehagaḷilladandu,
prāṇa niḥprāṇaṅgaḷilladandu,
ivēnēnū illadandu,
niṣkalaliṅga tānē nōḍā
jhēṅkāra nijaliṅgaprabhuve.