Index   ವಚನ - 56    Search  
 
ಲಿಂಗಸೌಖ್ಯದಲ್ಲಿ ಪರಿಪೂರ್ಣವಾದ ಶರಣನ ಅಂತರಂಗದಲ್ಲಿ ಕಾಮಮೋಹಾದಿಗಳುಂಟೇನಯ್ಯ? ಭ್ರಾಂತಿಸೂತಕ ಉಂಟೇನಯ್ಯ? ಹಮ್ಮು ಬಿಮ್ಮುಗಳುಂಟೇನಯ್ಯ? ತಾಮಸ ತಮಂಧಗಳುಂಟೇನಯ್ಯ? ಇಂತಿವಕ್ಕೆ ಸಿಲ್ಕದೆ ನಿತ್ಯನಿರಾಳಲಿಂಗದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.