ಪರಮಚಿದಂಶಿಕದಲ್ಲಿ ತತ್ಪರನಾದ ಶರಣನು,
ಮಹಾಘನ ಅಗಮ್ಯ ಅಗೋಚರ ಅಪ್ರಮಾಣ
ನಿರಾಕುಳ ನಿರ್ಭರಿತ ನಿಃಶೂನ್ಯ
ನಿರಾಮಯನೆನಿಸಿದ ಶರಣನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Paramacidanśikadalli tatparanāda śaraṇanu,
mahāghana agamya agōcara apramāṇa
nirākuḷa nirbharita niḥśūn'ya
nirāmayanenisida śaraṇanu nōḍā
jhēṅkāra nijaliṅgaprabhuve.