ನಾದಬಿಂದುಕಳಾತೀತಲಿಂಗವನು
ಮಹಜ್ಞಾನದಿಂದ ತಿಳಿದು,
ವಿಶ್ವಂಭರಿತವಾದ ನಿರಪೇಕ್ಷಲಿಂಗದಲ್ಲಿ ಕೂಡಿ
ನಿಸ್ಸಂಗ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Nādabindukaḷātītaliṅgavanu
mahajñānadinda tiḷidu,
viśvambharitavāda nirapēkṣaliṅgadalli kūḍi
nis'saṅga nirāḷanāda nōḍā
jhēṅkāra nijaliṅgaprabhuve.