ಊರೊಳಗಣ ಸೂಳೆಯ ಕರೆದು
ಮೂವರಿಗೆ ಒತ್ತೆಯ ಕೊಡುವುದು ಕಂಡೆನಯ್ಯ.
ಬೇರೆ ನಾಲ್ವರು ಬೇರೆ ಹುಯ್ಯಲು ಹೋಗುವರು ನೋಡಾ.
ಮೇಲಿಂದ ಒಬ್ಬ ಸತಿಯಳು ಐವರ ಹಿಡಿದು ನೋಡಲು
ಒತ್ತೆಯ ಕೊಟ್ಟ ಸೂಳೆಯ ಮನೆ ಒಡೆಯಿತ್ತು ನೋಡಾ!
ಬೇರೆ ನಾಲ್ವರು ಬೇರೆ ಮಡಿದರು ನೋಡಾ!
ಐವರ ಹೆಜ್ಜೆವಿಡಿದು ನೋಡಲು
ಆ ಹೆಜ್ಜೆಯೇ ಮಂಗಳ ಉದಯವೆಂಬ ಲಿಂಗದಲ್ಲಿ ಅಡಗಿಪ್ಪವಯ್ಯ.
ಆ ಸತಿಯಳ ಅಂಗವ ಕೂಡಿ ನಿರಂಜನವಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.