ಅಂಗಡಿಯ ರಾಜಬೀದಿಯಲ್ಲಿ ಶಿಶುವಿಪ್ಪುದ ಕಂಡೆನಯ್ಯ.
ಆ ಶಿಶುವಿಂಗೆ ಮೂವರು ಮಕ್ಕಳು ಹುಟ್ಟಿದರು ನೋಡಾ !
ಈ ಮಕ್ಕಳ ಕೈ ಬಾಯೊಳಗೆ ಮೂರು ಲೋಕಂಗಳೆಲ್ಲ
ನಚ್ಚುಮಚ್ಚಾಗಿಪ್ಪವು ನೋಡಾ !
ಅದು ಕಾರಣ, ಆದಿಯಲ್ಲಿ ಗುರುನಿರೂಪಣವಂ ಪಡೆದು
ಚಿತ್ತಾಜ್ಞೆಪ್ರಭೆದೋರಲು ಮೂರು ನಚ್ಚುಮಚ್ಚುಗಳು ಕರಗಿ
ಮೂರು ಮಕ್ಕಳು ಬಿಟ್ಟುಹೋದವು ನೋಡಾ !
ಆ ಶಿಶುವಿಂಗೆ ನಿರಾಳವೆಂಬ ದಾರಿಯ ತೋರಿ,
ಊರಿಂಗೆ ಹೋಗಲೊಡನೆ
ಅಲ್ಲಿ ಮಂಜಿನ ಕೊಡದ ಅಗ್ಗವಣಿಯ ಕಂಡು
ಲಿಂಗಕೆ ಮಜ್ಜನವ ನೀಡಿ, ನಿರಾವಲಂಬಲಿಂಗದೊಳು ಬೆರೆದು
ನಿಃಪ್ರಿಯವೆನಿಸಿತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.