Index   ವಚನ - 104    Search  
 
ಹದಿನಾರು ಎಸಳ ಸ್ಥಾವರಗದ್ದುಗೆಯಿಂದತ್ತತ್ತ, ಚಂದ್ರಕಾಂತದ ಲಿಂಗವ ಕಂಡೆನಯ್ಯಾ. ಆ ಲಿಂಗದ ಬೆಳಕು ಕೆಳಗೇಳು ಲೋಕಕ್ಕೆ ಮೇಲೇಳು ಲೋಕಕ್ಕೆ ನಿರಾಳಬಯಲ ತೋರಿತ್ತು. ಆ ಲಿಂಗದ ಬೆಳಗಿನೊಳಗೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಿಂದತ್ತತ್ತ ಸಾವಿರೆಸಳ ಮಂಟಪವ ಪೊಕ್ಕು, ನಿರಾಲಂಬಲಿಂಗದೊಳು ಕೂಡಿ ನಿಃಪ್ರಿಯನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.