Index   ವಚನ - 113    Search  
 
ಆದಿಯಲ್ಲಿ ಒಂದು ಲಿಂಗ ಬೇರೆ ಮೃದಂಗವ ನುಡಿಸಾಡುತ್ತಿರಲು ಆ ಲಿಂಗದ ಸಂತತಿಯಿಂದ ಆದ ಭಾವುಕನು ಬಂದು, ಸತ್ತ ಹೆಣನ ಎತ್ತಿಕೊಂಡು ಮಸಣಕ್ಕೆ ಒಯ್ಯಲು, ಆ ಹೆಣ ಎದ್ದು ಕುಳಿತು ಲಿಂಗಾರ್ಚನೆಯ ಮಾಡುವ ವ್ಯಾಳ್ಯದಲ್ಲಿ ಭಾವುಕ ನುಂಗಿ ನಿರ್ವಯಲಾದ ಭೇದವು ಸತ್ತವರಿಗೆ ಕಾಣಬಹುದು ಇದ್ದವರಿಗೆ ಕಾಣಬಾರದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.