ಪ್ರಥಮಕಾಲದಲ್ಲಿ ಓಂಕಾರವೆಂಬ ಲಿಂಗಕ್ಕೆ ನಾದಮೂರ್ತಿಯಾದ.
ಆ ನಾದಮೂರ್ತಿಗೆ ಬಿಂದುಮೂರ್ತಿಯಾದ.
ಆ ಬಿಂದುಮೂರ್ತಿಗೆ ಕಳಾಮೂರ್ತಿಯಾದ.
ಆ ಕಳಾಮೂರ್ತಿಗೆ ಶಿವನಾದ, ಆ ಶಿವನಿಂಗೆ ಸದಾಶಿವನಾದ,
ಆ ಸದಾಶಿವಂಗೆ ಈಶ್ವರನಾದ, ಆ ಈಶ್ವರಂಗೆ ರುದ್ರನಾದ,
ಆ ರುದ್ರಂಗೆ ವಿಷ್ಣುನಾದ, ಆ ವಿಷ್ಣುವಿಂಗೆ ಬ್ರಹ್ಮನಾದ,
ಆ ಬ್ರಹ್ಮಂಗೆ ನರರು ಸುರರು ದೇವಾದಿದೇವರ್ಕಳಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.