ಬ್ರಹ್ಮಂಗೆ ಸರಸ್ವತಿಯಾಗಿ ವಿಷ್ಣುವಂ ಪೂಜೆಯಂ ಮಾಡಲು,
ವಿಷ್ಣುವಿಂಗೆ ಲಕ್ಷ್ಮಿಯಾಗಿ ರುದ್ರನ ಪೂಜೆಯ ಮಾಡಲು,
ರುದ್ರಂಗೆ ಕ್ರಿಯಾಶಕ್ತಿಯಾಗಿ ಈಶ್ವರನ ಪೂಜೆಯಂ ಮಾಡಲು,
ಈಶ್ವರಂಗೆ ಇಚ್ಫಾಶಕ್ತಿಯಾಗಿ ಸದಾಶಿವನ ಪೂಜೆಯಂ ಮಾಡಲು,
ಸದಾಶಿವಂಗೆ ಜ್ಞಾನಶಕ್ತಿಯಾಗಿ ಪರಶಿವನ ಪೂಜೆಯನ್ನು ಮಾಡಲು,
ಪರಶಿವಂಗೆ ಪರಾಶಕ್ತಿಯಾಗಿ ಪರಬ್ರಹ್ಮನ ಪೂಜೆಯ ಮಾಡಲು,
ಪರಬ್ರಹ್ಮಂಗೆ ಚಿತ್‍ಶಕ್ತಿಯಾಗಿ
ಇಂತಿರ್ದ ಬ್ರಹ್ಮರ ಪೂಜೆಯಂ ಮಾಡುವುದ
ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Brahmaṅge sarasvatiyāgi viṣṇuvaṁ pūjeyaṁ māḍalu,
viṣṇuviṅge lakṣmiyāgi rudrana pūjeya māḍalu,
rudraṅge kriyāśaktiyāgi īśvarana pūjeyaṁ māḍalu,
īśvaraṅge icphāśaktiyāgi sadāśivana pūjeyaṁ māḍalu,
sadāśivaṅge jñānaśaktiyāgi paraśivana pūjeyannu māḍalu,
paraśivaṅge parāśaktiyāgi parabrahmana pūjeya māḍalu,
parabrahmaṅge citśaktiyāgi
intirda brahmara pūjeyaṁ māḍuvuda
kaṇḍe nōḍā jhēṅkāra nijaliṅgaprabhuve.