ಧರ್ಮವೆಂಬ ದಾರಿಯಲ್ಲಿ ಒಬ್ಬ ಸತಿಯಳು ನಿಂದು
ವರ್ಮವ ಮಾಡುತಿರ್ಪಳು ನೋಡಾ!
ಆ ವರ್ಮವ ಈ ಲೋಕದವರು ಆರಾರು ಕೇಳಬಲ್ಲರೆ ಅಯ್ಯಾ?
ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ಅಯ್ಯಾ!
ಇದು ಕಾರಣ ನಿರ್ದ್ವಂದ್ವವಾದ ಶರಣನು
ಆ ವರ್ಮವ ಕೊಳಬಲ್ಲನಯ್ಯ.
ಆ ವರ್ಮದ ದಾರಿಯ ನೆರೆ ಬಲ್ಲನಯ್ಯ
ಆ ಸತಿಯಳ ಅಂಗವ ಕೂಡಬಲ್ಲನಯ್ಯ
ನಿಷ್ಪತಿಲಿಂಗದಲ್ಲಿ ರಾಜಿಸಬಲ್ಲನಯ್ಯ
ಝೇಂಕಾರ ನಿಜಲಿಂಗಪ್ರಭುವೆ.