Index   ವಚನ - 178    Search  
 
ಆರು ಮೂರು ಕೇರಿಯ ಮುಂದೆ ಸುಳಿದಾಡುವ ತಾಯ ಅಂಗದಲ್ಲಿ ಒಬ್ಬ ಬಾಲಕ ಹುಟ್ಟಿ, ನೆನವೆಂಬ ಸತಿಯಳ ಕೂಡಿಕೊಂಡು, ಸಪ್ತಸಾಗರವ ದಾಂಟಿ, ಅಷ್ಟಕುಲಪರ್ವತವ ಮೆಟ್ಟಿ, ಒಂಬತ್ತು ಬಾಗಿಲ ಮುಂದೆ ನಡೆದು ಹೋಗುವ ಕಳ್ಳನನಟ್ಟಿ ಮುಂದಳ ಮೇರುವೆಯಲ್ಲಿ ಹಿಡಿದು ಒಪ್ಪಿಸಿಕೊಟ್ಟು ಆ ನೆನವೆಂಬ ಸತಿಯಳ ಬಯಲು ನುಂಗಿ ಆ ಬಾಲಕನು ತಾಯ ಅಂಗವ ಪೊಕ್ಕನು. ಮೇಲೆ ಒಬ್ಬ ಪುರುಷನು ಹಿಡಿದುದ ಸೋಜಿಗವ ಕಂಡು ಓಂ ನಮೋ ಓಂ ನಮೋ ಎನುತಿರ್ದನಯ್ಯ ನಿಮ್ಮ ಶರಣ ಝೇಂಕಾರ ನಿಜಲಿಂಗಪ್ರಭುವೆ.