Index   ವಚನ - 183    Search  
 
ಪೃಥ್ವಿಯೊಳಗಣ ಬಾಲಿಂಗೆ ಇಪ್ಪತ್ತೈದು ಯುವತೇರು ವಿಶ್ವಾಸವಂ ಮಾಡುತಿಪ್ಪರು ನೋಡಾ! ಅವರಿಂಗೆ ಹತ್ತೆಂಟು ಮುಖದೋರಿ ಈ ಜಗವನೆಲ್ಲಾ ಏಡಿಸ್ಯಾಡುತಿರ್ಪರು ನೋಡಾ! ಆದಿಯಲ್ಲಿ ಒಬ್ಬ ದೇವ ಬಂದು, ಹತ್ತೆಂಟು ಮುಖವ ಕೊಯ್ಯಲು, ಇಪ್ಪತ್ತೈದು ಯುವತೇರು ಬಿಟ್ಟು ಹೋದರು ನೋಡಾ! ಆ ಪೃಥ್ವಿಯೊಳಗಣ ಬಾಲೆಯ ಹಿಡಿದು ಪೃಥ್ವಿಂಗೆ ವರಿಸಿ ಭೂಮಂಡಲದೇವನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.