Index   ವಚನ - 209    Search  
 
ಒಳಗೆ ನೋಡಿದರೆ ತಾನೇ, ಹೊರಗೆ ನೋಡಿದರೆ ತಾನೇ, ಒಳಗು ಹೊರಗ ನುಂಗಿತ್ತು, ಹೊರಗು ಒಳಗ ನುಂಗಿತ್ತು, ಒಳಗೆ ಹೊರಗೆ ಇಲ್ಲದೆ ತಾನು ತಾನಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.