ಮೂರು ಕೊಂಬೆಯ ಮೇಲೆ,
ಕೋಗಿಲೆ ಕುಳಿತು ಕೂಗುತಿದೆ ನೋಡಾ.
ಆ ಕೋಗಿಲೆ ಕೂಗಿದ ನಾದಕ್ಕೆ
ಸಪ್ತೇಳುಸಾಗರಂಗಳು ಅರತಿದ್ದವು ನೋಡಾ.
ಸ್ವರ್ಗ ಮರ್ತ್ಯ ಪಾತಾಳಂಗಳು ಅಡಗಿರ್ದವು ನೋಡಾ.
ಅಷ್ಟಕುಲಪರ್ವತಂಗಳು ಕರಗಿದವು ನೋಡಾ.
ಈರೇಳುಭುವನ ಹದಿನಾಲ್ಕುಲೋಕಂಗಳೆಲ್ಲಾ
ಬಯಲಾದವು ನೋಡಾ.
ಮೂರು ಕೊಂಬೆಗಳು ಅಳಿದುಹೋದವು ನೋಡಾ.
ನಿಶ್ಚಿಂತ ನಿರಾಕುಳನೆಂಬ ಗುಡಿಗೆ
ಆ ಕೋಗಿಲೆ ಹಾರಿಹೋಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mūru kombeya mēle,
kōgile kuḷitu kūgutide nōḍā.
Ā kōgile kūgida nādakke
saptēḷusāgaraṅgaḷu aratiddavu nōḍā.
Svarga martya pātāḷaṅgaḷu aḍagirdavu nōḍā.
Aṣṭakulaparvataṅgaḷu karagidavu nōḍā.
Īrēḷubhuvana hadinālkulōkaṅgaḷellā
bayalādavu nōḍā.
Mūru kombegaḷu aḷiduhōdavu nōḍā.
Niścinta nirākuḷanemba guḍige
ā kōgile hārihōyittu nōḍā
jhēṅkāra nijaliṅgaprabhuve.