Index   ವಚನ - 219    Search  
 
ಬಯಲಿಂಗೆ ಬಯಲಾದ ಮನೆಯಲ್ಲಿ ಮೂವರು ಮಕ್ಕಳು ಆರು ಕೇರಿಯ ಹೊಕ್ಕು, ಶಿವಾಲಯ ಕಟ್ಟಿಸುವುದ ಕಂಡೆನಯ್ಯ. ಅದು ಹೇಗೆಂದಡೆ: ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬವ ನಿಲಿಸಿ ಇಪ್ಪತ್ತೈದು ಬೋದಂಗಳ ಭೇದಿಸಿ, ಮಹಾಜ್ಞಾನವೆಂಬ ತೊಲೆ ಜಂತಿಗಳ ಹಮ್ಮಿ, ಸಾವಯವೆಂಬ ಮೇಲುಮುದ್ದಿಯ ಹಾಕಿ ಪರಬ್ರಹ್ಮವೆಂಬ ಶಿಖರದ ಮೇಲೆ ನಿಷ್ಪತಿಲಿಂಗವಿಪ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.