Index   ವಚನ - 246    Search  
 
ಮೂರು ರತ್ನದ ಮೇಲೆ ಒಂದು ಮಂಡೂಕ ಕುಳಿತು ನವಗ್ರಹಂಗಳ ನುಂಗಿ ಕೂಗುತಿದೆ ನೋಡಾ. ಆ ಕೂಗಿನ ಭೇದವನರಿದ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.