Index   ವಚನ - 258    Search  
 
ಹೃದಯದೊಳಗಿರ್ಪ ಜ್ಯೋತಿಯ ಬೆಳಗಿನೊಳಗೆ ಮೂರು ಲೋಕಂಗಳೆಲ್ಲವು ಅಡಗಿರ್ದವು ನೋಡಾ. ಆ ಜ್ಯೋತಿಯ ಜ್ಞಾನವೆಂಬ ಸತಿಯಳು ಕಂಡು ತನ್ನ ಪುರುಷಂಗೆ ಪೇಳಲು ಆ ಪುರುಷನು ಆ ಜ್ಯೋತಿಯ ತೆಗೆದು ನಿಃಕಲ ಬ್ರಹ್ಮಲಿಂಗಕೆ ಬೆಳಗುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.