Index   ವಚನ - 259    Search  
 
ಅಂಗವೆಂಬ ಪಟ್ಟಣದೊಳಗೆ ಮಂಗಳವಾದ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಒಬ್ಬ ಚಿಚ್ಫಕ್ತಿ ಉದಯವಾದಳು ನೋಡಾ. ಆ ಚಿಚ್ಫಕ್ತಿಯ ಸಂಗದಿಂದ ಪರಬ್ರಹ್ಮವ ಕೂಡಿ ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.