Index   ವಚನ - 260    Search  
 
ಸಪ್ತೇಳುಸಾಗರದ ಮೇಲೆ ಅಷ್ಟ ಕುಲಪರ್ವತವ ಕಂಡೆನಯ್ಯ. ಅಷ್ಟಕುಲಪರ್ವತದ ಮೇಲೆ ಒಂದು ದೇಗುಲವ ಕಂಡೆನಯ್ಯ. ಆ ದೇಗುಲದೊಳಗೆ ಒಬ್ಬ ಭಾಮಿನಿ ಲಿಂಗಧ್ಯಾನವ ಮಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.