ಮಾತು ಇಲ್ಲದ ಮನೆಯಲ್ಲಿ ಒಬ್ಬ ಸತಿಯಳು ಕುಳಿತು
ನೀತಿಯ ಹೇಳುತಿರ್ಪಳು ನೋಡಾ.
ಆ ನೀತಿಯ ಜ್ಞಾನವೆಂಬ ಪುರುಷ ಕೇಳಿ
ಮೌನವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mātu illada maneyalli obba satiyaḷu kuḷitu
nītiya hēḷutirpaḷu nōḍā.
Ā nītiya jñānavemba puruṣa kēḷi
maunavāda sōjigava nōḍā
jhēṅkāra nijaliṅgaprabhuve.