ನಾಲ್ಕು ಮುಖದ ಸೂಳೆಯು
ಅರವತ್ತಾರು ಕೋಟಿ ಕೇರಿಗಳಲ್ಲಿ
ಸುಳಿಸುಳಿದಾಡುತಿರ್ಪಳು ನೋಡಾ.
ಆ ಸೂಳೆಯೊಳಗೆ ಬ್ರಹ್ಮ ವಿಷ್ಣು ರುದ್ರಾದಿಗಳು
ಅಡಗಿರ್ಪರು ನೋಡಾ.
ಇದು ಕಾರಣ, ಆದಿಯಲ್ಲಿ ಶಿವಜ್ಞಾನ ಉದಯದೋರಲು
ಅರವತ್ತಾರು ಕೋಟಿ ಕೇರಿಗಳು ಅಳಿದು ಹೋದವು.
ಆ ಸೂಳೆಯ ಮುಖ ಮುರಿದು ನಿಂದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.