Index   ವಚನ - 338    Search  
 
ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬದ ಮೇಲೆ ಆಕಾಶವೆಂಬ ಚಪ್ಪರವನಿಕ್ಕಿ, ಮಹಾಜ್ಞಾನವೆಂಬ ಗದ್ದುಗೆಯ ನೆಲೆಯಂಗೊಳಿಸಿ, ಚಂದ್ರ ಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ, ನಿಃಕಲಪರಬ್ರಹ್ಮಲಿಂಗಕ್ಕೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.