Index   ವಚನ - 339    Search  
 
ಅಂಗವಿಲ್ಲದ ಹಂಸಗೆ ಪಾದವೊಂದು, ಮುಖ ಮೂರು, ರೆಕ್ಕೆ ಆರು, ಮೂವತ್ತಾರು ಗರಿಗಳಿಪ್ಪವು ನೋಡಾ. ಆರುಮೂರು ದೇಶ ಮೀರಿ ನಿಂದು, ನಿರಾಲಂಬಲಿಂಗವ ಕೂಡಲಾಗಿ, ಅಂಗವಿಲ್ಲದ ಹಂಸ ಉದಯದೋರಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.