ಒಂದೊಂದಾಗಿ ಕೂಡಿದಲ್ಲಿಗೆ
ಬಂದನಯ್ಯ ಒಬ್ಬ ವಿಶ್ವಾಸಘಾತಕನು.
ಒಂದು ಒಂದಾಗಿರ್ದುದ ಕೆಡಿಸಿ
ಛಂದವಾಯಿತೆಂದೆಂಬ ಮುದುಗುರಿಯಮುಖವ
ನೋಡಲಾಗದು ಕಾಣಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ondondāgi kūḍidallige
bandanayya obba viśvāsaghātakanu.
Ondu ondāgirduda keḍisi
chandavāyitendemba muduguriyamukhava
nōḍalāgadu kāṇā
jhēṅkāra nijaliṅgaprabhuve.