Index   ವಚನ - 354    Search  
 
ಅಂಗಕಳೆ ಲಿಂಗದಲ್ಲಿ ಅರತು, ಲಿಂಗಕಳೆ ಭಾವದಲ್ಲಿ ಅರತು, ಆ ಭಾವಕ್ಕೆ ಬೆರಗಾಗಿ ತೋರುತಿದೆ ಒಂದು ಲಿಂಗ. ಆ ಲಿಂಗದ ನೆನಹಿನಲ್ಲಿ ಅಡಗಿಪ್ಪ ಶರಣರ ಎನಗೊಮ್ಮೆತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.