Index   ವಚನ - 363    Search  
 
ಆತ್ಮನೆಂಬ ಅಂಗದಲ್ಲಿ ನಿರಾತ್ಮನೆಂಬ ಲಿಂಗವು ತೋರಿತ್ತು ನೋಡಾ. ಆ ಲಿಂಗದಲ್ಲಿ ತನ್ನ ಸುಳುವ ತಾನೇ ನೋಡಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.