ಮೂರು ಮಂಟಪದ ಶಿವಾಲಯದ ಶಿಖರದ ಮೇಲೆ
ಅಘಟಿತಲಿಂಗವಿರ್ಪುದು ನೋಡಾ.
ಆ ಲಿಂಗದ ಹೃದಯಕಮಲದಲ್ಲಿ ಆರು ಮೂರ್ತಿಗಳಿಪ್ಪರುನೋಡಾ.
ಆರು ಮೂರ್ತಿಗಳಲ್ಲಿ ಆರು ಶಕ್ತಿಯರು
ಆರಾರು ಲಿಂಗಾರ್ಚನೆಯ ಮಾಡುತಿರ್ಪರು ನೋಡಾ.
ಏಕೋಮನೋಹರನೆಂಬ ಪೂಜಾರಿಯು,
ನಿಶ್ಚಿಂತ ನಿರಾಕುಳದ ಮೇಲೆ ನಿಂದು
ಅಘಟಿತಲಿಂಗಕ್ಕೆ ಮಹಾಜ್ಞಾನವೆಂಬ ಪೂಜೆಯ ಕಟ್ಟಿ
ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.