ತಂದೆ ಸತ್ತ ಮೇಲೆ ಆ ಲಿಂಗವ ತೆಗೆದು
ತಾನೇ ತನ್ನ ಕೈಯಲ್ಲಿ ಕಟ್ಟಿಕೊಂಡು ಶಿವಭಕ್ತರೆಂದು
ಈ ಮರ್ತ್ಯದಲ್ಲಿ ನಡೆದಾಡುವರು ನೋಡಾ.
ಅವರಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕ ಪ್ರಸಾದವಿಲ್ಲ.
ಇದು ಕಾರಣ, ಅವರು ಪಿತೃಲಿಂಗಸಂಸ್ಕಾರಿಗಳು ನೋಡಾ.
ಇಂತಪ್ಪ ನರಕಜೀವಿಗಳ ಮುಖವ ನೋಡಲಾಗದು
ಝೇಂಕಾರ ನಿಜಲಿಂಗಪ್ರಭುವೆ.