Index   ವಚನ - 405    Search  
 
ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು, ನಿತ್ಯವಿಡಿದು, ಪಶ್ಚಿಮಚಕ್ರದಲ್ಲಿಪ್ಪ ನಿರಂಜನಜ್ಯೋತಿಯ ಬೆಳಗನೊಳಕೊಂಡು ಸಾಜಸಮಾಧಿಯಲ್ಲಿ ನಿಂದು ನಿರಂಜನಲಿಂಗವನಾಚರಿಸುತಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.