ಶಿವಾತ್ಮಜ್ಞಾನ ಉದಯವಾದ ಮಹೇಶ್ವರನ ಅಂತರಂಗದಲ್ಲಿ
ಕಾಮ ಕ್ರೋಧಗಳುಂಟೇನಯ್ಯ?
ಲೋಭ ಮೋಹಗಳುಂಟೇನಯ್ಯ?
ಮದ ಮತ್ಸರಂಗಳುಂಟೇನಯ್ಯ?
ಭ್ರಾಂತು ಸೂತಕಂಗಳುಂಟೇನಯ್ಯ?
ಕರ್ಮದೋಷಂಗಳುಂಟೇನಯ್ಯ?
ಈ ಅಜ್ಞಾನಕ್ಕೆ ಸಿಲ್ಕದೆ, ತನ್ನ ನಿಲವ ತಾನೇ ನೋಡಿ
ನಿರಾಲಂಬಲಿಂಗದೊಳಿಪ್ಪ ಮಹೇಶ್ವರಂಗೆ
ಓಂ ನಮೋ ಓಂ ನಮೋ ಓಂ ನಮೋ ಎನುತಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.