ಆರು ದೇಶದ ಮೇಲೆ ಮೂರು ಮಂಡಲವ ಕಂಡೆನಯ್ಯ,
ಮೂರು ಮಂಡಲದ ಮೇಲೆ ಒಬ್ಬ ಪುರುಷನ ಕಂಡೆನಯ್ಯ.
ಆ ಪುರುಷನ ಸತಿಯಳು, ತತ್ಪುರುಷಲೋಕಕ್ಕೆ ಬಂದು,
ಈಶ್ವರನೆಂಬ ಮಗನ ಕೂಡಿಕೊಂಡು,
ನಿಟಿಲವೆಂಬ ಘಟದಲ್ಲಿ ನಿಂದು,
ಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು,
ಶಿಖಾಚಕ್ರವೆಂಬ ಮೇರುವೆಯ ಹತ್ತಿ,
ಪಶ್ಚಿಮಚಕ್ರವೆಂಬ ನಿರಂಜನಜ್ಯೋತಿಯ ಕೂಡಿ,
ಅತ್ತತ್ತಲೆ ಪರಕ್ಕೆ ಪರವ ತೋರುತಿಪ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.